ಪ್ರತಿ ಮಹಿಳೆಗೆ ಸಿಗುತ್ತೆ 3 ಲಕ್ಷ ರೂಪಾಯಿ! ಈ ಹಣ ಬೇಕಂದ್ರೆ ಹೀಗೆ ಮಾಡಿ ಸಾಕು! | UDYOGINI

Udyogini Scheme

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ (udyogini scheme karnataka) ಜಾರಿಗೆ ಬಂದಿರುವ ಉದ್ಯೋಗಿನಿ ಯೋಜನೆಯು ಮಹಿಳಾ ಉದ್ಯಮಿಗಳಿಗೆ 3 ಲಕ್ಷ ರೂಪಾಯಿಗಳವರೆಗೆ ಸಾಲ ಮತ್ತು ರಿಯಾಯಿತಿ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಯೋಜನೆಯ ಮೂಲಕ ಮಹಿಳೆಯರು ಸ್ವಂತ ಉದ್ಯಮ ಪ್ರಾರಂಭಿಸಲು ಅಥವಾ ವಿಸ್ತರಿಸಲು ಆರ್ಥಿಕ ಸಹಾಯ ಮತ್ತು ತರಬೇತಿ ಪಡೆಯಬಹುದು.

ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಈ ಕೆಳಗೆ ಹಂತ ಹಂತವಾದ ಮಾಹಿತಿಯನ್ನು ನೀಡಲಾಗಿದ್ದು ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.

Udyogini Scheme
ಯೋಜನೆ ಬಗ್ಗೆ ಯೋಜನೆಯ ವಿವರ
ಯೋಜನೆಯ ಹೆಸರು ಉದ್ಯೋಗಿನಿ ಯೋಜನೆ
ಅರ್ಹತೆ ಕರ್ನಾಟಕ ಮಹಿಳೆಯರು
ಸಹಾಯಧನ ಮೊತ್ತ 3 ಲಕ್ಷ
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್

ಯೋಜನೆಯ ಉದ್ದೇಶ (Project Objective) :- (Udyogini Scheme)

  • ಮಹಿಳೆಯರ ಸ್ವಾವಲಂಬನೆಗೆ ಸಹಾಯ
  • ಗೃಹ ಉದ್ಯಮಗಳನ್ನು ಪ್ರೋತ್ಸಾಹಿಸುವುದು
  • ಕಡಿಮೆ ಬಡ್ಡಿ ದರದಲ್ಲಿ ಸಾಲದ ಸೌಲಭ್ಯ
  • ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ
  • ಲಾಭದಾಯಕ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುವುದು

Udyogini Scheme

ಮಹಿಳೆಯರು ಸ್ವಾವಲಂಬಿ ಜೀವನ ಮಾಡಲು ಯಾವುದಾದರು ಗೃಹ ಉದ್ಯಮ ಶುರು ಮಾಡಲು ಎಲ್ಲೋ ಸಾಲವನ್ನು ಹೆಚ್ಚಿನ ಬಡ್ಡಿ ದರದಲ್ಲಿ ಸಾಲವನ್ನು ತೆಗೆದುಕೊಳ್ಳಬೇಕಾಗುತ್ತದೆ ಆದರಿಂದ ಮಹಿಳೆಯರಿಗೆ ಈ ಒಂದು ಹೊಸ ಉದ್ಯಮವನ್ನು ಶುರು ಮಾಡಲು ಸಮಸ್ಯೆ ಎದುರಾಗುತ್ತೆ. ಆದ್ದರಿಂದ ಯೋಜನೆ ಅಡಿಯಲ್ಲಿ ಲಾಭದಾಯಕ ವ್ಯಾಪಾರ ಚಟುವಟಿಕೆಗಳನ್ನ ಶುರು ಮಾಡಲು ಸರ್ಕಾರ ಈ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಹಾಗಾಗಿ ಇಂತಹ ಯೋಜನೆಯು ಹಲವಾರು ಉದ್ದೇಶಗಳನ್ನ ಹೊಂದಿದ್ದು ಅಷ್ಟೇ ಅಲ್ಲದೆ ಮಹಿಳೆಯರು ಒಂದು ಗ್ರಾಮೀಣ ಪ್ರದೇಶದಲ್ಲಿ ಉನ್ನತ ಹಾಗೂ ಆರ್ಥಿಕವಾಗಿ ಸ್ವಾವಲಂಬಿ ಜೀವನವನ್ನು ನಡೆಸಲು ಈ ಒಂದು ಯೋಜನೆ ತುಂಬಾನೆ ಸಹಾಯಕವಾಗಿದೆ.

ಪ್ರಯೋಜನಗಳು (Benefits) :- (Udyogini Scheme)

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರಿಗೆ ಘಟಕ ಸ್ಥಾಪಿಸಲು ಒಂದು ಲಕ್ಷದಿಂದ ಗರಿಷ್ಠ ಮೂರು ಲಕ್ಷದವರೆಗೆ ಇರುತ್ತೆ ಸಬ್ಸಿಡಿ ಸಾಲದ ಮೊತ್ತ 50% ಆಗಿದ್ದು ಕುಟುಂಬದ ಆದಾಯ ಮಿತಿ ವರ್ಷಕ್ಕೆ 2 ಲಕ್ಷಕ್ಕಿಂತ ಕಡಿಮೆ ಇರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಿಶೇಷ ವರ್ಗ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಗರಿಷ್ಠ ಘಟಕದ ವೆಚ್ಚ 3 ಲಕ್ಷ ವಿಶೇಷ ವರ್ಗದ ಮಹಿಳೆಯರಿಗೆ ಮತ್ತು ಸಾಮಾನ್ಯ ವರ್ಗದ ಮಹಿಳೆಯರಿಗೆ ಸಹಾಯಧನ 30% ಅಥವಾ ಗರಿಷ್ಠ 90ಸಾವಿರದವರಿಗೆ ಸಬ್ಸಿಡಿ ದೊರೆಯುತ್ತದೆ ಹಾಗೂ ಮಹಿಳೆಯರು ಒಂದು ಸ್ವಾವಲಂಬಿ ಜೀವನಕ್ಕೆ ಈ ಒಂದು ಯೋಜನೆಯ ತುಂಬಾನೇ ಸಹಕಾರಿಯಾಗಲಿದ್ದು ಗ್ರಾಮೀಣ ಪ್ರದೇಶದ ಮಹಿಳೆಯರು ಈ ಒಂದು ಯೋಜನೆಯ ಲಾಭವನ್ನು ಪಡೆಯಬಹುದು.

  1. ಪರಿಶಿಷ್ಟ ಜಾತಿ/ಪಂಗಡ ಮಹಿಳೆಯರಿಗೆ:
    • 1 ಲಕ್ಷ ರೂ. ರಿಂದ 3 ಲಕ್ಷ ರೂ. ವರೆಗೆ ಸಾಲ
    • 50% ಸಬ್ಸಿಡಿ (ರಿಯಾಯಿತಿ)
    • ಕುಟುಂಬದ ವಾರ್ಷಿಕ ಆದಾಯ ಮಿತಿ: 2 ಲಕ್ಷ ರೂ. ಗಿಂತ ಕಡಿಮೆ
  2. ವಿಶೇಷ ವರ್ಗ ಮತ್ತು ಸಾಮಾನ್ಯ ವರ್ಗದ ಮಹಿಳೆಯರಿಗೆ:
    • ಗರಿಷ್ಠ 3 ಲಕ್ಷ ರೂ. ವರೆಗೆ ಸಾಲ
    • 30% ಸಬ್ಸಿಡಿ (ಗರಿಷ್ಠ 90,000 ರೂ. ವರೆಗೆ)
    • ಕುಟುಂಬದ ವಾರ್ಷಿಕ ಆದಾಯ ಮಿತಿ: 1.5 ಲಕ್ಷ ರೂ. ಗಿಂತ ಕಡಿಮೆ

ಅರ್ಹತೆ (Eligibility):- (Udyogini Scheme)

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಹಿಳೆಯಾಗಿರಬೇಕು
  • ಸಾಮಾನ್ಯ ಮತ್ತು ವಿಶೇಷ ವರ್ಗಗಳಿಗೆ ಸೇರಿದ ಮಹಿಳಾ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 1.50 ಲಕ್ಷಕ್ಕಿಂತ ಕಡಿಮೆ ಇರಬೇಕು
  • ವಿಧವೆ ಅಥವಾ ಅಂಗವಿಕಲ ಮಹಿಳೆಯರಿಗೆ ಕುಟುಂಬದ ಆದಾಯದ ಮೇಲೆ ಯಾವುದೇ ಮಿತಿ ಇಲ್ಲ
  • ಎಲ್ಲ ವರ್ಗಗಳಿಗೆ ಅರ್ಜಿದಾರರ ವಯಸ್ಸು 18ರಿಂದ 55 ವರ್ಷದೊಳಗೆ ಇರಬೇಕು
  • ಅರ್ಜಿದಾರರು ಯಾವುದೇ ಹಣಕಾಸು ಸಂಸ್ಥೆಯಿಂದ ಪಡೆದಿರುವ ಹಿಂದಿನ ಸಾಲವನ್ನು ಮರುಪಾವತಿಸುವಲ್ಲಿ ವಿಫಲರಾಗಿರಬಾರದು
  • ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು

ಅಗತ್ಯವಿರುವ ದಾಖಲೆಗಳು (Required documents):-

  • ಅರ್ಜಿದಾರರ ಮೂರು ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರಗಳು.
  • ಸಾಲ ಪಡೆಯಲು ಬಯಸುವ ಚಟುವಟಿಕೆಯ ತರಬೇತಿ/ಅನುಭವದ ಬಗ್ಗೆ ಪ್ರಮಾಣಪತ್ರ.
  • ಆರ್ಥಿಕ ನೆರವು ಕೋರಿರುವ ಚಟುವಟಿಕೆಯ ವಿವರವಾದ ಯೋಜನಾ ವರದಿ (ಡಿಪಿಆರ್).
  • ಪಡಿತರ ಚೀಟಿ
  • ಮತದಾರರ ಗುರುತಿನ ಚೀಟಿ
  • ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ (SC/ST ಅರ್ಜಿದಾರರಾಗಿದ್ದರೆ).
  • ಯಂತ್ರೋಪಕರಣಗಳು, ಸಲಕರಣೆಗಳು ಮತ್ತು ಇತರ ಬಂಡವಾಳ ವೆಚ್ಚಗಳಿಗೆ ಉಲ್ಲೇಖಗಳು

ಆಫ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ (Offline application procedure):-

ಆಫ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ :-

ಗೃಹ ಉದ್ಯಮವನ್ನು ಶುರು ಮಾಡಲು ಸಾಲಕ್ಕೆ ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಗಳು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಹತ್ತಿರದ ಬ್ಯಾಂಕಿಗೆ ತೆಗೆದುಕೊಂಡು ಹೋಗಿ ಅಲ್ಲಿ ಎಲ್ಲಾ ಮಾಹಿತಿಯನ್ನ ಪಡೆದು ಅವರು ಕೇಳಿರುವಂತ ದಾಖಲೆಗಳನ್ನು ಕೊಟ್ಟು ಆಫ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ (How to apply online):-

ಹಂತ 1: ಅರ್ಜಿದಾರರು ಉದ್ಯೋಗಿನಿ ಯೋಜನೆಯಡಿ ಸಾಲಗಳನ್ನು ನೀಡುವ ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಸಾಲಗಳಿಗೆ ಅರ್ಜಿ ಸಲ್ಲಿಸಬಹುದು. (udyogini scheme karnataka apply online login) ಸಿಡಿಪಿಒ ಅರ್ಜಿಗಳನ್ನು ಪರಿಶೀಲಿಸುತ್ತದೆ ಮತ್ತು ಸ್ಪಾಟ್ ಪರಿಶೀಲನೆಯ ನಂತರ ಆಯ್ಕೆ ಸಮಿತಿಗೆ ಕಳುಹಿಸುತ್ತದೆ. ಆಯ್ಕೆ ಸಮಿತಿಯು ಸಾಲವನ್ನು ಪರಿಶೀಲಿಸಿ ಬ್ಯಾಂಕ್‌ಗಳಿಗೆ ಸಾಲ ಬಿಡುಗಡೆ ಮಾಡಲು ಕಳುಹಿಸುತ್ತದೆ.

ಹಂತ 2: ಬ್ಯಾಂಕ್ / ಕೆಎಸ್‌ಎಫ್‌ಸಿ ಅಧಿಕಾರಿಗಳು ದಾಖಲೆಗಳು ಮತ್ತು ಯೋಜನಾ ಪ್ರಸ್ತಾವನೆಯನ್ನು ಪರಿಶೀಲಿಸುತ್ತಾರೆ ಮತ್ತು ನಂತರ ಸಾಲದ ಅರ್ಜಿಯನ್ನು ಪ್ರಕ್ರಿಯೆಗೊಳಿಸುತ್ತಾರೆ. ಬ್ಯಾಂಕುಗಳು ಸಬ್ಸಿಡಿ ಬಿಡುಗಡೆಗಾಗಿ ನಿಗಮಕ್ಕೆ ವಿನಂತಿ ಪತ್ರವನ್ನು ಕಳುಹಿಸುತ್ತವೆ ಮತ್ತು ನಂತರ ಬ್ಯಾಂಕ್ ಸಾಲದ ಮೊತ್ತವನ್ನು ಬಿಡುಗಡೆ ಮಾಡುತ್ತದೆ.

ಹಂತ 3: ಸಾಲದ ಅರ್ಜಿಯನ್ನು ಅನುಮೋದಿಸಿದ ನಂತರ, ಸಾಲದ ಮೊತ್ತವನ್ನು ಅರ್ಜಿದಾರರ ಬ್ಯಾಂಕ್ ಖಾತೆಗೆ ಅಥವಾ ಯಂತ್ರೋಪಕರಣಗಳು, ಉಪಕರಣಗಳು ಅಥವಾ ಯಾವುದೇ ಇತರ ಬಂಡವಾಳ ವೆಚ್ಚಕ್ಕಾಗಿ ನೇರವಾಗಿ ಪೂರೈಕೆದಾರರ ಖಾತೆಗೆ ವಿತರಿಸಲಾಗುತ್ತದೆ.ಇನ್ನಷ್ಟು ಓದಿರಿ..


ತೀರ್ಮಾನ ( Conclusion) :-

ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಗಳು ಉದ್ಯೋಗಿನಿ ಈ ಯೋಜನೆಯ ಬಗ್ಗೆ (udyogini scheme karnataka )ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಆನ್ಲೈನ್ ಮುಖಾಂತರ ಹಾಗೂ ಆಫ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ ..

APPLICATION LINK :- CLICK HERE


ಪದೇ ಪದೆ ಕೇಳಲಾಗುವ ಪ್ರಶ್ನೋತ್ತರಗಳು:

Karnataka State Women Development Corporation ಜಾರಿಗೆ ತಂದಿದೆ.

ಗರಿಷ್ಠ ₹3 ಲಕ್ಷವರೆಗೆ ಸಾಲ ಸಿಗುತ್ತದೆ.

ಮಹಿಳೆಯರ ಸ್ವಾವಲಂಬನೆ ಮತ್ತು ಗೃಹ ಉದ್ಯಮ ಪ್ರೋತ್ಸಾಹ.

Leave a Reply

Your email address will not be published. Required fields are marked *