ಕೋಳಿ ಸಾಕಾಣಿಕೆ ಸಹಾಯಧನಕ್ಕೆ ಅರ್ಜಿ !! ಇಂದೇ ಅರ್ಜಿ ಸಲ್ಲಿಸಿ..! Naati Koli Scheme

Poultry Farming Schemes

ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕತೆಯ ಬೆನ್ನೆಲುಬಾದ ರೈತ ಸಮುದಾಯದ ಆದಾಯವನ್ನಾ ಇನ್ನಷ್ಟು ಹೆಚ್ಚಿಸಲು ಕೃಷಿ ಜೊತೆಗೆ ನಾಟಿ ಕೋಳಿ ಸಾಕಾಣಿಕೆ ಮಾಡಿ ಆರ್ಥಿಕವಾಗಿ ಸದೃಢರಾಗಲು ಸ್ವಯಂ ಉದ್ಯೋಗ ಯೋಜನೆಯನ್ನು ಜಾರಿಗೆ ತಂದಿದೆ.

Poultry Farming Schemes

Naati Koli Scheme

ಇತ್ತೀಚೆಗೆ ರಾಷ್ಟ್ರೀಯ ಜಾನುವಾರು ಮಿಷನ್ ಅಡಿಯಲ್ಲಿ ಸರ್ಕಾರವು ಕೋಳಿ ಸಾಕಾಣಿಕೆ ಉದ್ಯಮಕ್ಕೆ 50% ವರೆಗೆ ಬಂಡವಾಳ ಸಹಾಯಧನ ನೀಡುವ ಮಹಾತ್ಮಾ ಕಾಂಕ್ಷೆಯ ಯೋಜನೆಯನ್ನು ಜಾರಿಗೆ ತಂದಿದ್ದು ಕೋಳಿ ಸಾಕಾಣಿಕೆ ಮಾಡುವ ಪ್ರತಿಯೊಬ್ಬ ರೈತರಿಗೆ 48000 ಸಹಾಯಧನವನ್ನು ನೀಡಲಾಗುತ್ತಿದೆ ಈ ಯೋಜನೆಯ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲಾ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆಯಬಹುದು.

ಕೋಳಿ ಸಾಕಾಣಿಕೆ ಸಹಾಯಧನ ಅವಲೋಕನ (Poultry Farming Schemes)

ಯೋಜನೆಯ ಹೆಸರು ಕೋಳಿ ಸಾಕಾಣಿಕೆ ಯೋಜನೆ
ಯೋಜನೆಯ ಉದ್ದೇಶ ಕೋಳಿ ಸಾಕಾಣಿಕೆ ಗೆ ಪ್ರೋತ್ಸಹ
ಅರ್ಹತೆ ಕರ್ನಾಟಕದ ನಾಗರಿಕರು
ಯೋಜನೆ ಮೊತ್ತ 48000 ಸಹಾಯಧ
ಅರ್ಹತೆಯಾವುದೇ ಪದವಿ, B.Com, B.Sc, B.Tech/BE, BVSC, 10TH, BBM, M.Sc, MBA/PGDM
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಅದಿಕ್ರುತ ವೆಬ್ಸೈಟ್ ನೋಡಿ
Poultry Farming Schemes

ಯೋಜನೆಯ ಹಿನ್ನೆಲೆ (Project background) :- (Poultry Farming Schemes)

ಈ ಒಂದು ಯೋಜನೆಯು ಹಲವಾರು ವರ್ಷಗಳಿಂದ ಜಾರಿಯಲ್ಲಿದ್ದು 2021/ 22 ರಿಂದ ಪರಿಷ್ಕೃತ ರೂಪದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಪಶು ಸಂಪತ್ತು ಮತ್ತು ಕೋಳಿ ತಳಿ ಅಭಿವೃದ್ಧಿಯು ಗ್ರಾಮೀಣ ಆರ್ಥಿಕ ಅಭಿವೃದ್ಧಿಯ ಪ್ರಮುಖ ಅಂಶ ಎಂದು ಪರಿಗಣಿಸಿದೆ. ಈ ಯೋಜನೆಯಲ್ಲಿ ರೈತರು ಹಾಗೂ ಯುವ ಉದ್ಯಮಿಗಳಿಗೆ ಕೋಳಿ ಸಾಕಾಣಿಕೆ ಘಟಕಗಳನ್ನು ತೆರೆಯಲು ಸಹಾಯಧನವನ್ನು ಸರ್ಕಾರದ ಕಡೆಯಿಂದ ನೀಡಲಾಗುತ್ತಿದೆ ಯಾರೆಲ್ಲಾ ಕೋಳಿ ಸಾಕಾಣಿಕೆ ಮಾಡಿ ಸ್ವಾವಲಂಬಿ ಜೀವನವನ್ನು ನಡೆಸಲು ಇಚ್ಛಿಸುವ ವ್ಯಕ್ತಿಗಳು ಅರ್ಜಿಯನ್ನು ಸಲ್ಲಿಸಿ, ಈ ಯೋಜನೆಯ ಲಾಭವನ್ನು ಪಡೆಯಬಹುದು ಗ್ರಾಮೀಣ ಪ್ರದೇಶದಲ್ಲಿ ಯುವ ಉದ್ಯಮಿಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯ ಪ್ರಮುಖ ಉದ್ದೇಶ (The main objective of this project) :-

ಗ್ರಾಮೀಣ ಪ್ರದೇಶದಲ್ಲಿ ಇರುವ ರೈತರ ಆದಾಯವನ್ನು ದ್ವಿಗುಣಗೊಳಿಸುವಂತಹ ಉದ್ದೇಶವನ್ನು ಈ ಒಂದು ಯೋಜನೆ ಹೊಂದಿದೆ ರೈತರು ಕೃಷಿ ಚಟುವಟಿಕೆಗಳ ಮಧ್ಯೆ ಇಂತಹ ಯೋಜನೆಯ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬಹುದು. ಆರ್ಥಿಕತೆಯ ಬೆನ್ನೆಲುಬಾದ ರೈತ ಸಮುದಾಯದ ಆದಾಯವನ್ನು ಇನ್ನಷ್ಟು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಸ್ವಯಂ ಉದ್ಯೋಗ ಯೋಜನೆಯನ್ನು ಇದೀಗ ಜಾರಿಗೆ ತಂದಿದೆ ಇತ್ತೀಚಿಗೆ ರಾಷ್ಟ್ರೀಯ ಜಾನುವಾರು ಮಿಷನ್ ಅಡಿಯಲ್ಲಿ ಸರ್ಕಾರವು ಕೋಳಿ ಸಾಕಾಣಿಕೆಗೆ 50% ರವರೆಗೆ ಬಂಡವಾಳ ಸಹಾಯಧನವನ್ನು ನೀಡುವಂತಹ ಮಹತ್ವಕಾಂಕ್ಷೆ ಯೋಜನೆಯನ್ನು ಜಾರಿಗೆ ತಂದಿದ್ದು ಇದೀಗ ಈ ಯೋಜನೆಗೆ ಚಾಲನೆಯನ್ನು ನೀಡಲಾಗಿದೆ ಈ ಒಂದು ಯೋಜನೆಯ ಮೂಲಕ ಮಹಿಳೆಯರು ಸಹ ಸ್ವಾವಲಂಬಿ ಜೀವನವನ್ನು ನಡೆಸಲು ಸಹಾಯವಾಗುತ್ತದೆ.

ಅರ್ಹತಮಾನದಂಡಗಳು (Qualifications):- (Poultry Farming Schemes)

ಯೋಜನಾ ವರದಿ ಸಿದ್ದಪಡಿಸಿಕೊಳ್ಳಬೇಕು ಕನಿಷ್ಠ 10 ವರ್ಷಗಳ ಗುತ್ತಿಗೆ ಅಥವಾ ಸ್ವಂತ ಭೂಮಿ ಇರಬೇಕು ಆಧಾರ್ ಕಾರ್ಡ್ ,ಪಾನ್ ಕಾರ್ಡ್ ,ಬ್ಯಾಂಕ್ ವಿವರ ಸೇರಿದಂತೆ ಭೂಮಿಯ ದಾಖಲೆಯನ್ನು ಹೊಂದಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಬ್ಯಾಂಕ್ ಸಾಲ ಪಡೆಯುವವರು ಸಾಲ ಮಂಜೂರಾತಿ ಪತ್ರವನ್ನು ಸಲ್ಲಿಸಬೇಕಾಗುತ್ತದೆ ಕೋಳಿ ಸಾಕಾಣಿಕೆಯಲ್ಲಿ ಅನುಭವವಿಲ್ಲದವರು ತರಬೇತಿ ಪಡೆದಿರಬೇಕು ಅಥವಾ ತಜ್ಞರನ್ನ ನೇಮಿಸಿಕೊಳ್ಳಬೇಕು ಅಷ್ಟೇ ಅಲ್ಲದೆ ಕನಿಷ್ಠ ಅರ್ಧ ಎಕರೆ ಜಮೀನು ಹೊಂದಿರುವಂತ ರೈತರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಸಹಾಯಧನದ ವಿವರ (Subsidy details):- (Poultry Farming Schemes)

ಕೋಳಿ ಸಾಕಾಣಿಕೆ ಮಾಡುವ ಅಭ್ಯರ್ಥಿಗಳು ಶಡ್ ನಿರ್ಮಾಣ 25000

ಕೋಳಿ ಮರಿ ಖರೀದಿಗೆ 23,000

ಒಟ್ಟು 48000

ಘಟಕ ಸ್ಥಾಪನೆಗೆ ಮಾನದಂಡಗಳು (Criteria for unit establishment):-

ಘಟಕ ಸ್ಥಾಪನೆಯ ಮಾನದಂಡಗಳು ಈ ಕೆಳಗೆ ಹೀಗಿದೆ

ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 1000 ಚದುರ ಅಡಿ ಲೆಕ್ಕದಲ್ಲಿ ಶಡ್ ನಿರ್ಮಾಣ ಮಾಡಬೇಕು

ವಾರಕ್ಕೆ ರೂ. 3000 ಮೊಟ್ಟೆ ಮರಿ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಶೆಡ್ ನಿರ್ಮಾಣ ಮಾಡಬೇಕು

ವಾರಗಳವರೆಗೆ ಆರೈಕೆ ಮಾಡುವ ಸಾಮರ್ಥ್ಯ ಹೊಂದಿರಬೇಕು

ಸ್ವಂತ ಭೂಮಿಯನ್ನು ಹೊಂದಿರಬೇಕು

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು (Required documents for application) :-

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ವಿಳಾಸ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ಆದಾಯ ಪ್ರಮಾಣ ಪತ್ರ
  • ಯೋಜನಾ ವರದಿ
  • ತರಬೇತಿ ಅಥವಾ ಅನುಭವದ ದೃಢೀಕರಣ ಪ್ರಮಾಣ ಪತ್ರ
  • ಸ್ವಂತ ಅಥವಾ ಬಾಡಿಗೆಗೆ ಪಡೆದ ಭೂಮಿಯ ದಾಖಲೆ
  • ಬ್ಯಾಂಕಿನಿಂದ ನೀಡಲ್ಪಟ್ಟ ಸಾಲ ಪತ್ರ ಅಥವಾ ಗ್ಯಾರೆಂಟಿ ಪತ್ರ
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ರೇಷನ್ ಕಾರ್ಡ್ ಇನ್ನಿತರ ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ (How to apply):-

  • ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ
  • ಅಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಸಬ್ಮಿಟ್ ಮಾಡಿ
  • ನಂತರ ಬಂದ ಅರ್ಜಿ ಪ್ರತಿಯನ್ನ ಡೌನ್ಲೋಡ್ ಮಾಡಿಕೊಂಡು
  • ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ

ತೀರ್ಮಾನ (Conclusion):-

ಒಟ್ಟಾರೆಯಾಗಿ ಕೋಳಿ ಸಾಕಾಣಿಕೆ ಮಾಡುವಂತಹ ಅಭ್ಯರ್ಥಿಗಳು ಈ ಒಂದು ಯೋಜನೆಯ ಸಹಾಯಧನವನ್ನು 2025 26ನೇ ವರ್ಷದಲ್ಲಿ ಗ್ರಾಮೀಣ ಯುವಕರಿಗೆ ಉದ್ಯೋಗ ಆದಾಯ ಮತ್ತು ಸ್ವಾವಲಂಬನೆಗೆ ದಾರಿ ಮಾಡಿಕೊಡುವಂತಹ ಒಂದು ಅವಕಾಶ ಇದಾಗಿದ್ದು ಸರ್ಕಾರದ 50% ಬಂಪರ್ ಸಬ್ಸಿಡಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

Application Link Click Here

ಪದೇ ಪದೇ ಕೆಳಲಗುವ ಪ್ರಶ್ನೋತ್ತರಗಳು :

ಒಟ್ಟು 48000

Leave a Reply

Your email address will not be published. Required fields are marked *